Jan 13, 2020

ಓ ಮೂರ್ಖನೇ!


ಭರ ಭರನೇ ಭೋರ್ಗರಿಯುತ್ತಾ ಕಾವೇರಿಯು
ಒಂದೆಡೆ ಅರ್ಜುನನ ಬಾಣದಂತೆ
ಮತ್ತೊಂದೆಡೆ ದ್ರೌಪದಿಯ ಸಿರೇಯಂತೆ
ಕೊಳ್ಳೇಗಾಲದಲ್ಲಿ ಭರಚುಕ್ಕಿಯಾಗಿ ವಿಜೃಂಭಿಸಲು

ಅಲ್ಲಿ ನಿಂತಿರುವ ಕ್ಷುಲ್ಲಕ ಮನುಜನೆ
ಸೌದಂರ್ಯವನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯ ಬಲ್ಲೆಯಾ
ಮೂರ್ಖನೇ! ಪ್ರಕೃತಿಯ ಮಾಟವನ್ನು ಸವಿ
ನಿನ್ನ ಪೊಳ್ಳಾದ ಆಹಂ ಮರಿ, ಮುಂದೆ ನಡಿ...

                                          -- ಅಮರ್ದು